ಗುರುವಾರ, ಏಪ್ರಿಲ್ 12, 2012

ಬೇಧ-ಭಾವ

ಅಂದು ಅವಳ ಮನಸ್ಸು ಅವಳ ಹಿಡಿತದಲ್ಲಿ ಇರಲಿಲ್ಲ. ಅವಳಲ್ಲಿ ಎಂದೂ ಇಲ್ಲದ ಹೊಸ ಭಾವನೆ ಗದಿಗೆದರಿತ್ತು. ಅವಳ ಖುಷಿಯ ಜೊತೆ ತಳಮಳವೂ ಸೇರಿ ಆಕೆಯನ್ನು ಒಂದೆಡೆಗೆ ನಿಲ್ಲದಂತೆ ಮಾಡಿತ್ತು. ಗಂಡ ಮನೆಗೆ ಬರುವುದನ್ನೇ ಬರಹಾಯುತ್ತಿದ್ದ ಆಕೆ, ಕಾಲಿಂಗ್ ಬೆಲ್ ಸಪ್ಪಳವಾಗುತ್ತಿದಂತೆ ಬಾಗಿಲೆಡೆ ಓಡಿದಳು. ಗಂಡ ಎಂದಿನಂತೆ ತನ್ನ ಬ್ಯಾಗ್ ಅನ್ನು ಅವಳ ಕೈಯಲ್ಲಿ ಕೊಟ್ಟು ಒಳನಡೆದ. ಆಕೆ ಆತನನ್ನು ಹಿಂಬಾಲಿಸಿದಳು. ದಿನದಂತೆ ಇರದ ಹೆಂಡತಿಯ ಮುಖ ನೋಡಿ ಇವನೇ ಏನೆಂದು ಕೇಳಿದ. ಆಕೆ ತುಸು ನಾಚುತ್ತಾ ತನ್ನ ಕರುಳಲ್ಲಿ ಅರುಳುತ್ತಿರುವಬಹಳ  ಕುಡಿಯ ಕುರಿತು ಅರುಹಿದಳು. ಆತನೂ ಸಂತಸಗೊಂಡಿದ್ದ. ತಮ್ಮ ಮಗನಿಗೆ ಏನೆಂದು ಹೆಸರಿಡಬೇಕೆಂದು ನಿರ್ಧರಿಸಿದಂತಿತ್ತು ಆ ದಂಪತಿ.

ಹೊಸ ಅನುಭವಗಳೊಂದಿಗೆ, ಕುತೂಹಲಗಳೊಂದಿಗೆ, ಭರವಸೆ, ಉಮ್ಮೇದಿಗಳೊಂದಿಗೆ ಆಕೆಯು ತನ್ನ ಪುಟ್ಟ ಕಂದಮ್ಮನನ್ನು ಒಂಬತ್ತು ತಿಂಗಳು ಹೊತ್ತಿದ್ದಳು. ತನ್ನ ಮುದ್ದಾದ ಮಗುವಿನ ಬರುವಿಕೆಗಾಗಿ ಪ್ರೀತಿಯ ಧಾರೆಯೆರುವ ಗಂಡನೊಂದಿಗೆ ಕಾಯುತ್ತಿದ್ದಳು. ಅಂದು ಸಂಜೆಯ ಸಮಯದಲ್ಲಿ ಆಕೆಯಲ್ಲಿ ಪ್ರಸವದ ನೋವು ಕಾಣಿಸಿಕೊಂಡಿತ್ತು. ತುರ್ತಾಗಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ ಆಕೆಯ ಗಂಡ. ತಾಸಿನಷ್ಟು ಪ್ರಯಾಸದ ನಂತರ ಆಕೆಯ ಮುದ್ದಾದ ಮಗು ಆಕೆಯ ಒಡಲಲ್ಲಿ ಮಲಗಿತ್ತು. ಒಂದೆರಡು  ದಿನಗಳಲ್ಲಿ ಆಕೆಯ ನೆಂಟರಿಷ್ಟರು, ಹತ್ತಿರದವರು ಬಂದು ತಾಯಿ, ಮಗುವಿನ ಆರೋಗ್ಯ ವಿಚಾರಿಸಿ ಹೋಗಿದ್ದರು. ಆದರೆ ಅಲ್ಲಿ ಅವಳ ಗಂಡನ ಸುಳಿವೇ ಇರಲಿಲ್ಲ. ಮೂರು ದಿನಗಳ ನಂತರ ಮನೆಗೆ ಹೋದರೂ ಗಂಡ ಮಗುವನ್ನು ಎತ್ತಿ ಕೊಳ್ಳುತ್ತಿರಲ್ಲಿಲ್ಲ. ಮುಖಕ್ಕೆ ಮುಖ ಕೊಟ್ಟು ಮಾತನಾಡಿಸುತ್ತಿರಲಿಲ್ಲ.

ಅಂದು ಆಕೆ ಮಗುವಿನ ಬಟ್ಟೆಗಳನ್ನು ಒಣ ಹಾಕುತ್ತಿದ್ದಳು. ಕಂದಮ್ಮ ಭೂಮಿಗೆ ಬಂದು ಎರಡು ತಿಂಗಳು ಕಳೆದಿತ್ತು. ಒಮ್ಮೆಲೇ ಜೋರಾಗಿ ಮಗು ಅಳುವ ಶಬ್ದ ಕೇಳಿತು. ಒಳಗೆ ಹೋಗಿ ನೋಡಿದರೆ ಗಂಡ ಮಗುವನ್ನು ಜೋರಾಗಿ ಬಡಿಯುತ್ತಿದ್ದ. ಕೂಡಲೇ ಹೋಗಿ ಮಗುವನ್ನು ಕಸಿದು ತನ್ನೆದೆಗೆ ಅವಚಿಕೊಂಡು ಗಂಡನಿಗೆ ಬಾಯಿಗೆ ಬಂದಂತೆ ಬೈದಳು. ತುಸು ಸುಧಾರಿಸಿಕೊಂಡು ಆತನ ವರ್ತನೆಗೆ ಕಾರಣವನ್ನು ಕೇಳಿದ ಆಕೆಗೆ ಏನು ಮಾಡಲು ತೋಚುತ್ತಿರಲಿಲ್ಲ. ತನ್ನ ಮಗುವನ್ನು ಅಪ್ಪಿಕೊಂಡು ಅಳುತ್ತಿದ್ದಳು. ತನ್ನ ಅಪ್ಪನ ತಾನು ಬೇಡ ಎಂಬುದನ್ನೂ ತಿಳಿಯದ ಆ ಹೆಣ್ಣುಗೂಸು, ಅಮ್ಮನ ಅಪ್ಪುಗೆಯಲ್ಲಿ ಅಳುತ್ತಿತ್ತು. ಆದರೆ ಅಮ್ಮ- ಮಗುವಿನ ಬಾಂಧವ್ಯ ಗಟ್ಟಿಯಾಗಿರಲಿಲ್ಲ. ಕೆಲವೇ ದಿನಗಳಲ್ಲಿ ಕಟುಕ ಅಪ್ಪನ ರಾಕ್ಷಸ ಕಾಯಕಕ್ಕೆ ಮಗು ಬಲಿಯಾಗಿತ್ತು. ಜಗತ್ತನ್ನು ನೋಡುವ ಮುನ್ನವೇ ಕಣ್ಣು ಮುಚ್ಚಿತ್ತು.





 P.S. : This blog is written as a tribute to baby AFREEN, who lost her life , before even seeing how beautiful, life was..
Please go through the following link, for the details :
http://indiatoday.intoday.in/story/bangalore-battered-baby-afreen-dead/1/183900.html

ಕ್ರೂರ ಜಗತ್ತಿಗೆ ಧಿಕ್ಕಾರ....!!!

-ಕಾವ್ಯ

6 ಕಾಮೆಂಟ್‌ಗಳು:

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ಸತ್ಯವಾಗಿಯು ಅವಿವೇಕಿ ಜಗತ್ತು, "ಹೆಣ್ಣು ತಾಯಿಯಾಗಿ ಬೇಕು, ಹೆಂಡತಿಯಾಗಿ ಬೇಕು ಆದರೆ ಮಗಳಾಗಿ ಯಾಕೆ ಬೇಡ?" ಎಂಬ ಜಾಹೀರಾತಿನ ಪ್ರಶ್ನೆಯನ್ನು ಕುರಿತುಪ್ರತಿಯೊಬ್ಬರೂ ಆಲೋಚಿಸಬೇಕು.ಆಫ್ರೀನ್ ಅಂತಹ ಅದೆಷ್ಟು ಹಸುಗೂಸುಗಳ ಬಲಿ ನಡೆದಿವೆಯೋ? ಇನ್ನೆಷ್ಟು ನಡೆಯಲಿವೆಯೋ?

    ಪ್ರತ್ಯುತ್ತರಅಳಿಸಿ
  3. ಸತ್ತೊಂದು ಜೀವಕ್ಕೆ ನೊಂದು ಮಿಡಿದ ಬರಹ.. ಮನಮುಟ್ಟಿತು :-( ಹೆಣ್ಣುಹೆಣ್ಣೆಂದೇಕೆ ಹೀಗಳಿವೆ ? ಹೆತ್ತ ತಾಯಿ ಹೆಣ್ಣಲ್ಲವೇ ? ಒಡಹುಟ್ಟಿದ ಅಕ್ಕ-ತಂಗಿಯರು ಹೆಣ್ಣಲ್ಲವೇ? ಜೀವನವಿಡೀ ಜೊತೆಗಿರುವ ಅರ್ಧಾಂಗಿ ಹೆಣ್ಣಲ್ಲವೇ ಎಂಬರ್ಥದ ಸಾಲುಗಳು ಮತ್ತೆ ನೆನಪಾಗಿ ಕಾಡಿದವು :-(

    ಪ್ರತ್ಯುತ್ತರಅಳಿಸಿ
  4. The world has become like this... In earlier days when sin exceeded its limit God had taken his avatars like Rama, Krishna to save the world from the great sinners like Ravana, Kauravas... But at this stage of real world we can only see multiple Ravanas or Kauravas but no one is ready to give a proper justice to the world... Hope that the next avatar of God come ASAP....

    ಪ್ರತ್ಯುತ್ತರಅಳಿಸಿ